
30th January 2025
ಕನಕದುರ್ಗಮ್ಮ ಗುಡಿ ಅಂಡರ್'ಪಾಸ್ ಕಾಮಗಾರಿ ಫೆ.09ರಂದು ಉದ್ಘಾಟನೆ
ಬಳ್ಳಾರಿ, ಜ.27: ಬಳ್ಳಾರಿ ನಗರದ ಕನಕದುರ್ಗಮ್ಮ ಗುಡಿ ಬಳಿಯ ಅಂಡರ್'ಪಾಸ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಫೆ.09ರಂದು ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಲಿದೆ ಎಂದು ಶಾಸಕ ನಾರಾ ಭರತ್ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ಸಂಜೆ ಅಂಡರ್'ಪಾಸ್ ರಸ್ತೆ ಉದ್ಘಾಟನೆ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಇತ್ತಿಚೆಗೆ ಕಾಮಗಾರಿ ಸ್ಥಳಕ್ಕೆ ಭೇಟೌ ನೀಡಿದ್ದ ಶಾಸಕ ನಾರಾ ಭರತ್ ರೆಡ್ಡಿ; ಸದರಿ ಅಂಡರ್'ಪಾಸ್'ನ ಮಧ್ಯೆ ಮೇಲ್ಭಾಗದಲ್ಲಿ ರೆಲ್ವೆ ಟ್ರ್ಯಾಕ್ ಇದ್ದು ಆ ಭಾಗದ ಕಾಮಗಾರಿಯು ವಿಳಂಬ ಆಗಿದ್ದು, ಅದಕ್ಕೆ ಸಂಬಂಧಿಸಿ ರೈಲ್ವೆ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದು, ಕಾಮಗಾರಿ ಪೂರ್ಣಗೊಳಿಸಲು ಸಹಕರಿಸುವಂತೆ ಸೂಚಿಸಿದ್ದರು.
ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹಕರಿಸುವಂತೆ ಅವರು ಕೋರಿದ್ದಾರೆ.